ಬೆಂಗಳೂರು, ಸೆಪ್ಟೆಂಬರ್ 3, 2026
ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ NHM ಗುತ್ತಿಗೆ ನೌಕರರ ಸಂಘ (ನೋಂದಾಯಿತ) – TUCI ವತಿಯಿಂದ PHCO ಮತ್ತು HIO ಹುದ್ದೆಗಳಿಗೆ B.Sc Nursing ಅರ್ಹತೆಯನ್ನು ಸೇರಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅಧಿಕೃತ ಆಕ್ಷೇಪಣೆ ಸಲ್ಲಿಸಲಾಗಿದೆ.
PHCO ಮತ್ತು HIO ಹುದ್ದೆಗಳಿಗೆ B.Sc Nursing ಅರ್ಹತೆಯನ್ನು ಸೇರಿಸುವುದನ್ನು ಕೈಬಿಟ್ಟು, ಈಗಾಗಲೇ ಸೇವೆ ಸಲ್ಲಿಸುತ್ತಿರುವ CHOಗಳ ಸೇವೆ ಹಾಗೂ ಉದ್ಯೋಗ ಭದ್ರತೆಯನ್ನು ರಕ್ಷಿಸುವಂತೆ ಸಂಘವು ಸರ್ಕಾರವನ್ನು ಒತ್ತಾಯಿಸಿದೆ.
ಅಂತಿಮ ನಿಯಮಗಳನ್ನು ರೂಪಿಸುವ ಮೊದಲು ಈಗಿರುವ ನೇಮಕಾತಿ ನಿಯಮಗಳು ಹಾಗೂ ANM, GNM ಮತ್ತು B.Sc Nursing ಅರ್ಹತೆಗಳ ನಡುವಿನ ವ್ಯತ್ಯಾಸಗಳನ್ನು ಸರ್ಕಾರ ಪರಿಗಣಿಸಬೇಕು ಎಂದು ಸಂಘ ಮನವಿ ಮಾಡಿದೆ.
CHOಗಳ ಹಿತಾಸಕ್ತಿ, ಸೇವಾ ಭದ್ರತೆ ಹಾಗೂ ಉದ್ಯೋಗ ಭದ್ರತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಂಘವು ಕಾನೂನುಬದ್ಧವಾಗಿ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಮುಂದುವರಿಸಲಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ಮಮಿತ್ ಗಾಯಕವಾಡ ತಿಳಿಸಿದ್ದಾರೆ.
— ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ NHM ಗುತ್ತಿಗೆ ನೌಕರರ ಸಂಘ (ರಿ) – TUCI


ನೌಕರರ ಬಗ್ಗೆ ಕಿಂಚಿತ್ತೂ ಯೋಚಿಸದೆ ತೆಗೆದುಕೊಂಡಿರುವ ಈ ನಿರ್ಧಾರ ಸರ್ಕಾರದ ತಪ್ಪು ನಿರ್ಧಾರ… PHCO, HIO post ಗೆ Bsc Nursing ಸೇರಿಸಿದರೆ HIO post ಗಾಗಿ ಓದಿರುವ Diploma in Health Inspector ಮತ್ತು PHCO post ಗೆ ಓದಿರುವ ANM course ನವರ ಮುಂದಿನ ಭವಿಷ್ಯ ಏನು?? ಈಗಾಗಲೇ Bsc Nursing ಓದಿ CET exam ಬರೆದು, ಮೆರಿಟ್ ಆಧಾರಿತ ಸೆಲೆಕ್ಟ್ ಆಗಿರುವ CHO ಗಳ ಭವಿಷ್ಯ ಏನು???
CHO ಗಳಲ್ಲಿ ಎಲ್ಲಾ ವರ್ಗದ ಜನರು ಸೇವೆ ಸಲ್ಲಿಸುತ್ತಿದ್ದಾರೆ… Sc, st, obc, Gen ಕೋಟಾ etc ಸರ್ಕಾರದ ನಿಯಮದಂತೆ ಆಯ್ಕೆಯಾಗಿದ್ದಾರೆ
ಈ ನಿರ್ಧಾರಕ್ಕೆ ಸಮಸ್ತ ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ನಮ್ಮ ಸಮಸ್ತ ಕುಟುಂಬ ಬೀದಿಗಿಳಿದು ಹೋರಾಟ ಮಾಡಲಿದೆ….