ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್ಎಚ್ಎಂ ಗುತ್ತಿಗೆ ನೌಕರರ ಸಂಘದಿಂದ ತಿಳಿಸಲಾಗುವುದು ಏನೆಂದರೆ, 2022–23ನೇ ಸಾಲಿನ ಬಾಕಿ ಇರುವ ವೇತನ ಹೆಚ್ಚಳ ಕುರಿತಾಗಿ ಮಾನ್ಯ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಈ ವಿಷಯದಲ್ಲಿ ಮಾನ್ಯ ನ್ಯಾಯಾಲಯ ನೀಡಿದ ಅವಕಾಶಗಳಿದ್ದರೂ ಸಹ, ಸಂಬಂಧಪಟ್ಟ ಇಲಾಖೆ ಎರಡು ಬಾರಿ ನಡೆದ ವಿಚಾರಣೆಗಳಿಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿದೆ. ಇದು ಸಮುದಾಯ ಆರೋಗ್ಯ ಅಧಿಕಾರಿಗಳು (CHO) ನೌಕರರ ನ್ಯಾಯಸಮ್ಮತ ಹಕ್ಕುಗಳನ್ನು ನಿರ್ಲಕ್ಷಿಸುವಂತಾಗಿದೆ.ಈ ಹಿನ್ನೆಲೆಯಲ್ಲಿ, ಕಾನೂನು ಕ್ರಮದ ಮೂಲಕ ಇಲಾಖೆಗೆ ಅಂತಿಮ ನೋಟಿಸ್ ಜಾರಿಗೊಳಿಸಲಾಗಿದೆ.
ಮಾನ್ಯ ನ್ಯಾಯಾಲಯವು ಮುಂದಿನ ವಿಚಾರಣೆ ದಿನಾಂಕವನ್ನು 05.05.2026 ಬೆಳಿಗ್ಗೆ 11:00 ಗಂಟೆಗೆ ನಿಗದಿಪಡಿಸಿದ್ದು, ಆ ದಿನವೂ ಇಲಾಖೆ ಹಾಜರಾಗದಿದ್ದರೆ ಪ್ರಕರಣವನ್ನು ಏಕಪಕ್ಷೀಯವಾಗಿ (Ex parte) ವಿಚಾರಿಸಿ ತೀರ್ಪು ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.
ಆದ್ದರಿಂದ, ಸಂಬಂಧಪಟ್ಟ ಇಲಾಖೆ ತಕ್ಷಣವೇ ಕ್ರಮ ಕೈಗೊಂಡು ವಿಚಾರಣೆಗೆ ಹಾಜರಾಗಿ, ಬಾಕಿ ಇರುವ ವೇತನ ಹೆಚ್ಚಳದ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಬೇಕೆಂದು ಸಂಘವು ಆಗ್ರಹಿಸುತ್ತದೆ.ಸಂಘವು ಸಮುದಾಯ ಆರೋಗ್ಯ ಅಧಿಕಾರಿಗಳು ನೌಕರರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದ್ದು, ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಸುತ್ತದೆ.
ಪ್ರಕಟಿಸಿದವರು:
ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್ಎಚ್ಎಂ ಗುತ್ತಿಗೆ ನೌಕರರ ಸಂಘ(ರಿ)

Which court, which division
Sir nimge jayavagsli
Sadya Adre Court kottiruva Notice kuda Share madi .
Hage ne Routine Immnization Session bagge tumba force madta iddare madle beku anta adkke sambadisidante ondu case madi court alli stay tagoli .
Hagu ToR du Stay madsi , otherwise CHOs andre yava place vacant ide alli CHO inda kelsa madistare .
Which court
https://shorturl.fm/T4j5P