ಬಾಗಲಕೋಟೆ|31.01.2026
ದಿನಾಂಕ 31/01/2026 ರಂದು ಸಮುದಾಯ ಆರೋಗ್ಯ ಅಧಿಕಾರಿಗಳ ಜಿಲ್ಲಾ ಸಂಘಟನೆಯ ವತಿಯಿಂದ “ವಾರ್ಷಿಕ ಸ್ನೇಹ ಸಮ್ಮೇಳನ–2025” ಅನ್ನು ಬಾಗಲಕೋಟೆ ನಗರದಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ ಡಿ ಎನ್(ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು – DHO, ಬಾಗಲಕೋಟೆ), ಡಾ. ದಯಾನಂದ ಕರೆಣ್ಣವರ (DSO), ಡಾ. ಕುಸುಮಾ ಮಾಗಿ (DMO), ಡಾ. ಸುವರ್ಣ ಕುಲಕರ್ಣಿ (DTO), ಡಾ. ಶಿವನಗೌಡ ಪಾಟೀಲ (DLO) ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘಟನೆಯ ಒಗ್ಗಟ್ಟು ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ CHOಗಳ ಪಾತ್ರವನ್ನು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಮಂಜುನಾಥ ಡಿ ಎನ್ ರವರು, 6 ವರ್ಷ ಸೇವೆ ಪೂರೈಸಿದ ಸಮುದಾಯ ಆರೋಗ್ಯ ಅಧಿಕಾರಿಗಳ ಖಾಯಂಮಾತಿ ಸಂಬಂಧಿಸಿದ ಅಹವಾಲನ್ನು NHM ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ CHOಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶ್ರೀ. ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯಾಧ್ಯಕ್ಷರು –ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ, ಬೆಂಗಳೂರು., ಡಾ. ಅಜಿತ್ ಪಾಟೀಲ, ಜಿಲ್ಲಾ CHO ಸಂಯೋಜಕರು ಹಾಗೂ ಶ್ರೀ. ಶೇಖರ ಕೋಲ್ಕರ, ಅಧ್ಯಕ್ಷರು – ಜಿಲ್ಲಾ ಶುಶ್ರೂಷಾಧಿಕಾರಿ ಸಂಘಟನೆ , ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದ ವಿಶೇಷ ಕ್ಷಣವಾಗಿ, ಗಣ್ಯರ ಸಮ್ಮುಖದಲ್ಲಿ ಜಿಲ್ಲಾ CHO ಸಂಘಟನೆಯ 2026ನೇ ಸಾಲಿನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ, ಹೊಸಾಗಿ ಆಯ್ಕೆಯಾದ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ
ಶ್ರೀ. ರವಿ ಕಾಂಬ್ಳೆ (ಅಧ್ಯಕ್ಷರು), ಶ್ರೀ. ಸಂಜೀವ ಅರಭಾವಿ (ಸಂಸ್ಥಾಪಕ ಅಧ್ಯಕ್ಷರು ಹಾಗೂ ರಾಜ್ಯ ಸಂಘಟನೆಯ ಸಹ ಸಂಘಟನಾ ಕಾರ್ಯದರ್ಶಿಗಳು), ಶ್ರೀ. ಗುರು ಮಠ (ಪ್ರಧಾನ ಕಾರ್ಯದರ್ಶಿಗಳು), ಶ್ರೀ. ವಿನೋದ ರಾಠೋಡ (ಉಪಾಧ್ಯಕ್ಷರು), ಶ್ರೀ. ಶಾಂತಿಸಾಗರ ಖೇಮಲಾಪುರೆ (ಉಪಾಧ್ಯಕ್ಷರು), ಶ್ರೀ. ದರಿಯಪ್ಪ ನಾಯ್ಕರ (ರಾಜ್ಯ ಸಂಘದ ಸದಸ್ಯರು), ಶ್ರೀಮತಿ ಅನುಷಾ ಶಿರಗುಪ್ಪಿಕರ (ರಾಜ್ಯ ಸಂಘದ ಮಹಿಳಾ ಪ್ರತಿನಿಧಿ) ಅವರು ಉಪಸ್ಥಿತರಿದ್ದರು.
ತಾಲೂಕಾ ಮಟ್ಟದಲ್ಲಿ ಬೀಳಗಿ – ಶ್ರೀ ಭೀಮರಾಯ ಚೂರಿ, ಹುನಗುಂದ – ಶ್ರೀ ನಾಸೀರ K, ಜಮಖಂಡಿ – ಶ್ರೀ ಪ್ರಸನ್ನ ಗಲಗಲಿ, ಬಾದಾಮಿ – ಶ್ರೀ ಜಂಪಣ್ಣ ಕಟಗೇರಿ, ಮುಧೋಳ – ಶ್ರೀ ಕೃಷ್ಣಾ ಮುಳ್ಳೂರ ಹಾಗೂ ಬಾಗಲಕೋಟೆ – ಶ್ರೀ ಮಲ್ಲಿಕಾರ್ಜುನ ಮೇಟಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮ ಯಶಸ್ವಿಯಾಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ ರಾಜ್ಯ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಜಿಲ್ಲಾ ಸಂಘಟನೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಗಿದೆ.
ಪ್ರಕಟಣೆ:
ಜಿಲ್ಲಾ ಸಮಿತಿ
ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ
ಬಾಗಲಕೋಟೆ
