News Update
ಬೆಂಗಳೂರು | 27.01.2026
ಬೆಂಗಳೂರು : ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿಗಳಲ್ಲಿ ಋತುಚಕ್ರದ ರಜೆ ಕುರಿತು ವ್ಯಾಪಕ ಗೊಂದಲಗಳು ಉಂಟಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಪತ್ರಿಕೆಗಳಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆಯುತ್ತಿರುವ ಕುರಿತು ವರದಿಗಳು ಪ್ರಕಟವಾಗಿರುವುದರಿಂದ ಗೊಂದಲ ಮತ್ತಷ್ಟು ಹೆಚ್ಚಾಗಿದೆ.
ಈ ಹಿನ್ನಲೆಯಲ್ಲಿ, ಆರೋಗ್ಯ ಇಲಾಖೆಯಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿಗಳ ಪರವಾಗಿ, ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘವು ಋತುಚಕ್ರದ ರಜೆಯ ಅನ್ವಯತೆ ಹಾಗೂ ಜಾರಿಗೆ ಸಂಬಂಧಿಸಿದಂತೆ ಸ್ಪಷ್ಟ, ಅಧಿಕೃತ ಮತ್ತು ಪ್ರಾಮಾಣಿಕ ಮಾರ್ಗಸೂಚಿಗಳನ್ನು ನೀಡುವಂತೆ ಮಾನ್ಯ ಕಾರ್ಮಿಕ ಆಯುಕ್ತರಿಗೆ ಅಧಿಕೃತವಾಗಿ ಪತ್ರ ಸಲ್ಲಿಸಿದೆ.
ಮಹಿಳಾ ನೌಕರರ ಆರೋಗ್ಯ, ಗೌರವ ಮತ್ತು ನ್ಯಾಯಸಮ್ಮತ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಕಾರ್ಮಿಕ ಇಲಾಖೆಯಿಂದ ಸ್ಪಷ್ಟೀಕರಣ ನೀಡಬೇಕೆಂದು ಸಂಘವು ಮನವಿ ಮಾಡಿದೆ.
ಮಾನ್ಯ ಕಾರ್ಮಿಕ ಆಯುಕ್ತರಿಂದ ಋತುಚಕ್ರದ ರಜೆ ಕುರಿತು ಅಧಿಕೃತ ಸ್ಪಷ್ಟೀಕರಣ ದೊರಕಿದ ತಕ್ಷಣ, ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಶಿಬಿರದ ಮೂಲಕ ಸಮಗ್ರ ಹಾಗೂ ನಿಖರ ಮಾಹಿತಿಯನ್ನು ಶೀಘ್ರದಲ್ಲೇ ಅಧಿಕೃತವಾಗಿ ನೀಡಲಾಗುವುದು.
ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿಗಳ ನ್ಯಾಯಸಮ್ಮತ ಹಕ್ಕುಗಳ ರಕ್ಷಣೆಗೆ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘವು ಸದಾ ಬದ್ಧವಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದ ಎಲ್ಲ ಮುಂದಿನ ಬೆಳವಣಿಗೆಗಳನ್ನು ಅಧಿಕೃತವಾಗಿ ಮಾಹಿತಿ ನೀಡಲಾಗುವುದೆಂದು ರಾಜ್ಯ ಅಧ್ಯಕ್ಷರಾದ ಶ್ರೀ ಮಮಿತ್ ಗಾಯಕ್ವಾಡ್ ಅವರು ತಿಳಿಸಿದ್ದಾರೆ.
