whatsapp image 2025 10 17 at 11.30.10 pm (1)

ಮಂಡ್ಯ ಜಿಲ್ಲೆ AAK ಗಳ ಬಾಡಿಗೆ ಬಾಕಿ – ಸಮುದಾಯ ಆರೋಗ್ಯ ಅಧಿಕಾರಿಗಳು ಸಂಕಷ್ಟದಲ್ಲಿ……!

  • ಮಂಡ್ಯ ಜಿಲ್ಲೆಯಲ್ಲಿ ಕೆಲವು ಆಯುಷ್ಮಾನ್ ಆರೋಗ್ಯ ಕೇಂದ್ರಗಳು (AAKs) ಕಳೆದ 6–7 ತಿಂಗಳಿನಿಂದ ಬಾಡಿಗೆ ಪಾವತಿಸದೆ ಇರುವುದರಿಂದ ಗಂಭೀರ ಸಮಸ್ಯೆ ಉಂಟಾಗಿದೆ.
  • ದಿನಾಂಕ 16.10.2025 ರಂದು, ಬಾಡಿಗೆದಾರರು ಕೇಂದ್ರಗಳನ್ನು ಖಾಲಿ ಮಾಡಲು ಪ್ರಯತ್ನಿಸಿ, ಕೆಲವು ಸಂದರ್ಭಗಳಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ಮೇಲೆ ಕಠಿಣವಾಗಿ ಮಾತುಗಳು ಮತ್ತು ಜಗಳ ಕೂಡ ನಡೆದಿದೆ.
  • ಸಮುದಾಯ ಆರೋಗ್ಯ ಅಧಿಕಾರಿ ತಾತ್ಕಾಲಿಕವಾಗಿ 3 ತಿಂಗಳ ಬಾಡಿಗೆ ಪಾವತಿಸಿ, ಕೇಂದ್ರದ ಪೀಠೋಪಕರಣಗಳನ್ನು ಉಳಿಸಿಕೊಂಡು ಕ್ಲಿನಿಕ್ ಕಾರ್ಯ ನಿರ್ವಹಣೆಯನ್ನು ಮುಂದುವರೆಸಿದರು.
  • ಆದರೆ ಬಾಕಿ ಬಾಡಿಗೆಗಳ ಪಾವತಿಸದೇ ಇರುವುದರಿಂದ ಕೇಂದ್ರಗಳ ನಿರಂತರ ಕಾರ್ಯ ನಿರ್ವಹಣೆ ಅಪಾಯದಲ್ಲಿದೆ.
  • ಸಂಬಂಧಿತ ಅಧಿಕಾರಿಗಳಿಂದ ಸ್ಪಷ್ಟನೆ ಬೇಕಾಗಿದೆ:
    • ಮಂಡ್ಯ ಜಿಲ್ಲೆ AAK ಗಳ ಬಾಡಿಗೆ ಬಿಡುಗಡೆ ಆಗಿದೆಯೆ?
    • ಆದ್ರೆ, ಬಾಡಿಗೆದಾರರಿಗೆ ಹಣ ಏಕೆ ತಲುಪುತ್ತಿಲ್ಲ?

ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್‌ಎಚ್‌ಎಮ್ ಗುತ್ತಿಗೆ ನೌಕರರ ಸಂಘ (ರಿ) ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ಬಾಕಿ ಬಾಡಿಗೆ ಬಿಡುಗಡೆ ಮಾಡಿ ಕೇಂದ್ರಗಳ ನಿರಂತರ ಕಾರ್ಯ ನಿರ್ವಹಣೆ ಖಚಿತಪಡಿಸಬೇಕೆಂದು ಆಗ್ರಹಿಸಿದೆ.

Share

1 thought on “ಮಂಡ್ಯ ಜಿಲ್ಲೆ AAK ಗಳ ಬಾಡಿಗೆ ಬಾಕಿ – ಸಮುದಾಯ ಆರೋಗ್ಯ ಅಧಿಕಾರಿಗಳು ಸಂಕಷ್ಟದಲ್ಲಿ……!”

Leave a Comment

Your email address will not be published. Required fields are marked *