ಕಲಬುರಗಿ|01.02.2026
ಕಲಬುರಗಿ: ನಗರದ ಕನ್ನಡ ಭವನದಲ್ಲಿ ಪ್ರಬುದ್ಧ ಡೆವಲಪ್ಮೆಂಟ್ ಫೌಂಡೇಶನ್ ವತಿಯಿಂದ ಕ್ರಾಂತಿಜ್ಯೋತಿ ಮಾತೆ ಸಾವಿತ್ರಿಬಾಯಿ ಪುಲೆ ಹಾಗೂ ಫಾತಿಮಾ ಶೇಖ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ತೋರಿದ ಅಪೂರ್ವ ಸಾಧನೆ, ನಿಷ್ಠಾವಂತ ಸೇವೆ ಮತ್ತು ಸಮಾಜದ ಪ್ರಗತಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಸಮುದಾಯ ಆರೋಗ್ಯ ಅಧಿಕಾರಿ ಭಾಗ್ಯಶ್ರೀ ಎಲ್. ಧನ್ನಿ ಅವರಿಗೆ 2026ನೇ ಸಾಲಿನ ಫುಲೆ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪೂಜ್ಯರು, ರಾಜಕೀಯ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು, ಫೌಂಡೇಶನ್ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
