ಬೆಂಗಳೂರು | ದಿನಾಂಕ: 09/02/2026
ಬೆಂಗಳೂರು: ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ದಿನಾಂಕ 12.11.2025 ರಂದು ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ (Menstrual Cycle – MC Leave) ರಜೆ ನೀಡುವ ಕುರಿತು ಅಧಿಕೃತ ಆದೇಶವನ್ನು ಹೊರಡಿಸಿದ್ದು, ಅದಕ್ಕೆ ಈಗ ಮೂರು ತಿಂಗಳು ಕಳೆದಿದ್ದರೂ ರಾಜ್ಯದ ಆರೋಗ್ಯ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ (CHOs) ಈ ಸೌಲಭ್ಯವನ್ನು ಇನ್ನೂ ಅನುಷ್ಠಾನಗೊಳಿಸಿಲ್ಲ ಎಂಬುದು ಅತ್ಯಂತ ಖಂಡನೀಯ ಸಂಗತಿಯಾಗಿದೆ.
ಕಾರ್ಮಿಕ ಇಲಾಖೆಯ ಆದೇಶವು ರಾಜ್ಯದ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಸಮಾನವಾಗಿ ಅನ್ವಯವಾಗುವ ಕಲ್ಯಾಣಾತ್ಮಕ ಆದೇಶವಾಗಿದ್ದು, ಆರೋಗ್ಯ ಇಲಾಖೆಯು ಈ ಆದೇಶವನ್ನು ಅನುಷ್ಠಾನಗೊಳಿಸದೇ ವಿಳಂಬ ಮಾಡುತ್ತಿರುವುದು ಮಹಿಳಾ ಸಿಬ್ಬಂದಿಯ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಇಂದು ಸಂಘದ ರಾಜ್ಯ ಸಮಿತಿಯ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಋತುಚಕ್ರ (MC Leave) ರಜೆ ತಕ್ಷಣ ಜಾರಿಗೊಳಿಸುವಂತೆ ಅಧಿಕೃತ ಮನವಿ ಪತ್ರವನ್ನು ಸಲ್ಲಿಸಲಾಗಿದೆ.
ಸಂಘದ ಅಭಿಪ್ರಾಯದಲ್ಲಿ, ಮಹಿಳಾ ಸಿಬ್ಬಂದಿಯ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಗೌರವಯುತ ಕೆಲಸದ ವಾತಾವರಣಕ್ಕಾಗಿ ಋತುಚಕ್ರ ರಜೆ ಅತ್ಯಂತ ಅಗತ್ಯವಾಗಿದ್ದು, ಇದನ್ನು ನಿರ್ಲಕ್ಷಿಸುವುದು ಮಹಿಳಾ ಕಾರ್ಮಿಕರ ಮೇಲಿನ ಅನ್ಯಾಯವಾಗಿದೆ.
ಕಾರ್ಮಿಕ ಇಲಾಖೆಯ ಆದೇಶವನ್ನು ಯಾವುದೇ ಗೊಂದಲವಿಲ್ಲದೆ ತಕ್ಷಣ ಅನುಷ್ಠಾನಗೊಳಿಸಿ, ರಾಜ್ಯದ ಎಲ್ಲಾ ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ MC Leave ರಜೆ ನೀಡಬೇಕು ಎಂದು ಸಂಘವು ಸರ್ಕಾರವನ್ನು ಆಗ್ರಹಿಸಿದೆ.
ಮುಂದಿನ ದಿನಗಳಲ್ಲಿ ಈ ವಿಷಯದಲ್ಲಿ ಸ್ಪಷ್ಟ ಕ್ರಮ ಕೈಗೊಳ್ಳದಿದ್ದಲ್ಲಿ, ಕಾರ್ಮಿಕ ಇಲಾಖೆ, ಮಹಿಳಾ ಆಯೋಗ ಹಾಗೂ ನ್ಯಾಯಾಂಗ ಹೋರಾಟ ಸೇರಿದಂತೆ ಮುಂದಿನ ಹಂತದ ಹೋರಾಟಕ್ಕೆ ಸಂಘ ಮುಂದಾಗಲಿದೆ ಎಂದು ಸಂಘ ಅಧಿಕೃತವಾಗಿ ತಿಳಿಸಿದೆ.

Hello! Could you please tell me who is responsible for your website development? I’d like to offer a solution that reduces the load of customer requests and saves up to 28.800 USD per year. The AI-powered virtual consultant “AI Consultant for Shop” is a chat feature for product cards on your website. istorskiy-lab.ru/en/