whatsapp image 2026 02 09 at 3.37.43 pm

ರಾಜ್ಯ ಸಮಿತಿಯ ಪದಾಧಿಕಾರಿಗಳಿಗೆ Protected Workman ಸ್ಥಾನಮಾನ: ಉಪ ಕಾರ್ಮಿಕ ಆಯುಕ್ತರ ಆದೇಶಕ್ಕೆ ಸಂಘದ ಸ್ವಾಗತ – ಮಮಿತ್ ಗಾಯಕ್ವಾಡ್, ರಾಜ್ಯಾಧ್ಯಕ್ಷರು

ಕಲಬುರಗಿ|09.02.2026

ಕಲಬುರಗಿ: ರಾಜ್ಯ ಸಮಿತಿಯ ಪದಾಧಿಕಾರಿಗಳನ್ನು Protected Workman ಎಂದು ಪರಿಗಣಿಸಿ ಅಧಿಕೃತ ಆದೇಶ ಹೊರಡಿಸಿರುವ ಉಪ ಕಾರ್ಮಿಕ ಆಯುಕ್ತರ ಕ್ರಮವನ್ನು ಸಂಘವು ಹರ್ಷದಿಂದ ಸ್ವಾಗತಿಸುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಮಮಿತ್ ಗಾಯಕ್ವಾಡ್ ಅವರು ತಿಳಿಸಿದ್ದಾರೆ.

ಸುಮಾರು ಎರಡು ವರ್ಷಗಳ ಕಾಲ ಸಂಘವು ನಿರಂತರವಾಗಿ ಮನವಿ ಪತ್ರಗಳನ್ನು ಸಲ್ಲಿಸಿ, ಕಾರ್ಮಿಕ ಇಲಾಖೆಯ ಮುಂದೆ ರಾಜ್ಯ ಸಮಿತಿಯ ಪದಾಧಿಕಾರಿಗಳಿಗೆ Protected Workman ಸ್ಥಾನಮಾನ ನೀಡುವಂತೆ ಆಗ್ರಹಿಸುತ್ತಾ ಬಂದಿತ್ತು. ಈ ಸಂಬಂಧ ಇದೀಗ ಕಾರ್ಮಿಕ ಇಲಾಖೆ ರಾಜ್ಯ ಸಮಿತಿಯ ಪದಾಧಿಕಾರಿಗಳನ್ನು Protected Workman ಎಂದು ಪರಿಗಣಿಸಿ ಅಧಿಕೃತ ಆದೇಶವನ್ನು ಹೊರಡಿಸಿರುವುದು ಸಂಘದ ದೀರ್ಘಕಾಲದ ನ್ಯಾಯಸಮ್ಮತ ಬೇಡಿಕೆಗೆ ದೊರೆತ ಮಹತ್ವದ ಯಶಸ್ಸಾಗಿದೆ.

Protected Workman ಸ್ಥಾನಮಾನದ ಪ್ರಮುಖ ಅಂಶಗಳು:

  1. Protected Workman ಸ್ಥಾನಮಾನ ಪಡೆದ ಪದಾಧಿಕಾರಿಗಳನ್ನು ಸಂಸ್ಥೆ ಇಚ್ಛೆಯಂತೆ ಸೇವೆಯಿಂದ ವಜಾಗೊಳಿಸಲು, ಅಮಾನತು ಮಾಡಲು ಅಥವಾ ವರ್ಗಾವಣೆ ಮಾಡಲು ಸಾಧ್ಯವಿಲ್ಲ.
  2. ಯಾವುದೇ ಶಿಸ್ತು ಕ್ರಮ ಅಥವಾ ಸೇವೆಯಿಂದ ವಜಾಗೊಳಿಸುವ ಮೊದಲು ಕಾರ್ಮಿಕ ಇಲಾಖೆಯ ಪೂರ್ವಾನುಮತಿ ಕಡ್ಡಾಯ.
  3. ಸಂಘಟನಾ ಚಟುವಟಿಕೆಗಳಲ್ಲಿ ಧೈರ್ಯವಾಗಿ ಭಾಗವಹಿಸಲು ಕಾನೂನುಬದ್ಧ ರಕ್ಷಣೆ.
  4. ಯೂನಿಯನ್ ಪದಾಧಿಕಾರಿಗಳ ಮೇಲೆ ಪ್ರತೀಕಾರಾತ್ಮಕ ಕ್ರಮಗಳನ್ನು ತಡೆಯುವ ಭದ್ರತೆ.
  5. ಕಾರ್ಮಿಕರ ಸಮಸ್ಯೆಗಳನ್ನು ಆಡಳಿತದ ಮುಂದೆ ನಿರ್ಭಯವಾಗಿ ಪ್ರತಿನಿಧಿಸಲು ನೆರವು.

ಈ ಆದೇಶದಿಂದ ರಾಜ್ಯ ಸಮಿತಿಯ ಪದಾಧಿಕಾರಿಗಳ ಹಕ್ಕುಗಳು ಹಾಗೂ ಸಂಘಟನಾ ಚಟುವಟಿಕೆಗಳಿಗೆ ಕಾನೂನುಬದ್ಧ ರಕ್ಷಣೆ ದೊರಕಲಿದೆ. ಈ ನ್ಯಾಯೋಚಿತ ಹಾಗೂ ಕಾರ್ಮಿಕ ಸ್ನೇಹಿ ಕ್ರಮ ಕೈಗೊಂಡ ಉಪ ಕಾರ್ಮಿಕ ಆಯುಕ್ತರಿಗೆ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಮಮಿತ್ ಗಾಯಕ್ವಾಡ್
ರಾಜ್ಯಾಧ್ಯಕ್ಷರು

Share

10 thoughts on “ರಾಜ್ಯ ಸಮಿತಿಯ ಪದಾಧಿಕಾರಿಗಳಿಗೆ Protected Workman ಸ್ಥಾನಮಾನ: ಉಪ ಕಾರ್ಮಿಕ ಆಯುಕ್ತರ ಆದೇಶಕ್ಕೆ ಸಂಘದ ಸ್ವಾಗತ – ಮಮಿತ್ ಗಾಯಕ್ವಾಡ್, ರಾಜ್ಯಾಧ್ಯಕ್ಷರು”

  1. ರಾಜ್ಯ ಸಮಿತಿಯ ಪದಾಧಿಕಾರಿಗಳಿಗೆ Protected Workman ಸ್ಥಾನಮಾನ ದೊರೆತಿರುವುದು ಎಲ್ಲಾ CHO ಸಹೋದ್ಯೋಗಿಗಳಿಗೆ ಮಹತ್ವದ ಹಾಗೂ ಐತಿಹಾಸಿಕ ಸಾಧನೆ.
    ಸಂಘದ ನಿರಂತರ ಹೋರಾಟಕ್ಕೆ ಅಭಿನಂದನೆಗಳು.
    ಇದು ನಮ್ಮ ಹಕ್ಕುಗಳ ರಕ್ಷಣೆಗೂ ಹಾಗೂ ಭವಿಷ್ಯದ ಭದ್ರತೆಗೆ ದೊಡ್ಡ ಬಲ ನೀಡಲಿದೆ.
    ಧನ್ಯವಾದಗಳು @ರಾಜ್ಯಾಧ್ಯಕ್ಷರು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳಿಗೆ…

Leave a Comment

Your email address will not be published. Required fields are marked *