PHCO ಹುದ್ದೆಗೆ B.Sc ನರ್ಸಿಂಗ್ ಅಭ್ಯರ್ಥಿಗಳ ಅರ್ಹತೆಯನ್ನು ಕೈಬಿಡದಿದ್ದಲ್ಲಿ ರಾಜ್ಯ ಮಟ್ಟದ ಹೋರಾಟ: ಮಮಿತ್ ಗಾಯಕವಾಡ
ದಿನಾಂಕ:29.04.2026ಸ್ಥಳ : ಬೆಂಗಳೂರು ಬೆಂಗಳೂರು: ಸಮುದಾಯ ಆರೋಗ್ಯ ಅಧಿಕಾರಿಗಳ (CHO) ಹುದ್ದೆಗೆ ಸಂಬಂಧಿಸಿದಂತೆ, PHCO ಹುದ್ದೆಗೆ B.Sc ನರ್ಸಿಂಗ್ ಅಭ್ಯರ್ಥಿಗಳಿಗೆ ನೀಡಲಾಗಿರುವ ಅರ್ಹತೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘವು ಸರ್ಕಾರವನ್ನು ತೀವ್ರವಾಗಿ ಆಗ್ರಹಿಸುತ್ತದೆ. ಈ ಸಂಬಂಧವಾಗಿ ಈಗಾಗಲೇ ಇಲಾಖೆಗೆ ಲಿಖಿತ ಆಕ್ಷೇಪಣೆ ಸಲ್ಲಿಸಲಾಗಿದೆ. ಅಲ್ಲದೆ, ಮಾನ್ಯ ಆರೋಗ್ಯ ಸಚಿವರನ್ನು ಮೂರರಿಂದ ನಾಲ್ಕು ಹಂತಗಳಲ್ಲಿ ಭೇಟಿ ಮಾಡಿ ವಿಷಯದ ಗಂಭೀರತೆಯನ್ನು ಮನವರಿಕೆ ಮಾಡಲಾಗಿದೆ. ಜೊತೆಗೆ, ಮಾನ್ಯ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಈ ವಿಷಯವನ್ನು […]


